ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಫಿನ್ ಲ್ಯಾಂಡ್ನ ರಾಯಭಾರಿಗಳಾದ ನೀನಾ ವಾಸ್ಕುನ್ಲಾತಿ ಅವರ ಭೇಟಿಯ ಮುಖ್ಯಾಂಶಗಳು

ಮಾನ್ಯ ಮುಖ್ಯಮಂತ್ರಿ

ವಿಧಾನಸೌಧ (ಬೆಂಗಳೂರು), ಅಕ್ಟೋಬರ್ 04

-ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಫಿನ್ ಲ್ಯಾಂಡ್ ರಾಯಭಾರಿಗಳಾದ ನೀನಾ ವಾಸ್ಕುನ್ಲಾತಿ ಅವರು ವಿಧಾನಸೌಧದಲ್ಲಿ ಭೇಟಿ ಮಾಡಿದರು.

-ಕಳೆದ ಸಾಲಿನಲ್ಲಿ ಫಿನ್ ಲ್ಯಾಂಡ್ ಮತ್ತು ಕರ್ನಾಟಕದ ಮಧ್ಯೆ ಆಗಿದ್ದ ಒಪ್ಪಂದದಿಂದ ಸಾಕಷ್ಟು ಪ್ರಗತಿಯಾಗಿದ್ದು, ಈ ಒಪ್ಪಂದವನ್ನು ಕೈಗಾರಿಕೆ, ಶಿಕ್ಷಣ ಮತ್ತು ಇಂಧನ ಕ್ಷೇತ್ರಗಳನ್ನು ಒಳಗೊಂಡಂತೆ ಮತ್ತಷ್ಟು ವಿಸ್ತೃತಗೊಳಿಸಿ ಮುಂದುವರೆಸಲು ಫಿನ್ ಲ್ಯಾಂಡ್ ಉತ್ಸುಕವಾಗಿದೆ ಎಂದು ನೀನಾ ವಾಸ್ಕುನ್ಲಾತಿ ತಿಳಿಸಿದರು.

-ನವೆಂಬರ್ ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಫಿನ್ ಲ್ಯಾಂಡ್ ನ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವರು ಭಾಗವಹಿಸಲಿದ್ದಾರೆ ಎಂದರು.

-ಬೆಂಗಳೂರಿನಲ್ಲಿ 5 ಜಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿರುವ ಫಿನ್ ಲ್ಯಾಂಡ್ ನ ನೋಕಿಯಾ ಕಂಪನಿ, ಸ್ಟಾರ್ಟ್ಅಪ್ ಗಳಿಗೆ ಹೊಸ ತಂತ್ರಜ್ಞಾನದ ನೆರವು ಮತ್ತು ತರಬೇತಿಯನ್ನು ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.

-ಕರ್ನಾಟಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಇತರೆ ಕ್ಷೇತ್ರಗಳಿಗೂ ವಿಸ್ತರಿಸಲು ಫಿನ್ ಲ್ಯಾಂಡ್ ತೋರಿಸಿರುವ ಆಸಕ್ತಿಯನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂದರು. ಈ ನಡೆ ಎರಡೂ ಪ್ರಾಂತ್ಯಗಳ ನಡುವಿನ ಸಾಮರಸ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.

-ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ ಇ.ವಿ.ರಮಣರೆಡ್ಡಿ, ಕಾರ್ಯದರ್ಶಿ ಡಾ ಸೆಲ್ವಕುಮಾರ್ ಉಪಸ್ಥಿತರಿದ್ದರು.