ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಪ್ರಮುಖ ಸೂಚನೆಗಳು

know_the_cm

ಉಡುಪಿ ಸೆಪ್ಟೆಂಬರ್ 07:

**ಪ್ರಾಕೃತಿಕ ವಿಕೋಪ ರೂ.140.00 ಕೋಟಿ ನಷ್ಟ ಈಗಾಗಲೇ ರೂ.18.00ಕೋಟಿ ಬಿಡುಗಡೆ ಮಾಡಲಾಗಿದೆ.

**ಗ್ಯಾಸ್ ಸಂಪರ್ಕ ಸಿಗದಿದ್ದರೂ, ಪಡಿತರ ಚೀಟಿಯಲ್ಲಿ ನಮೂದಾಗಿದೆ. ಇದನ್ನು ತೆಗೆಸಲು ಕ್ರಮಕೈಗೊಳ್ಳಬೇಕು. ಅವರಿಗೆ ಗ್ಯಾಸ್ ಸಿಲಿಂಡರ್ ತಲುಪುವವರೆಗೆ ಸೀಮೆಎಣ್ಣೆ ಮುಂದುವರಿಸಬೇಕು.

**ಪಡಿತರ ಕಾರ್ಡ್ ತ್ವರಿತವಾಗಿ ಕಳುಹಿಸಬೇಕು. ಒಂದು ತಿಂಗಳೊಳಗೆ ಪಡಿತರ ಚೀಟಿ ವಿಲೇವಾರಿಗೆ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು.

**ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ – ಕಾಲುಸಂಕಗಳನ್ನು ಆದ್ಯತೆಯಲ್ಲಿ ನಿರ್ಮಿಸಬೇಕು. ಗ್ರಾಮೀಣ ರಸ್ತೆ ಸಂಪರ್ಕ ದುರಸ್ಥಿಗೊಳಿಸಬೇಕು.

**ಉದ್ಯೋಗ ಖಾತ್ರಿ ಯೋಜನೆ – Social Audit ಸರಳೀಕರಣಗೊಳಿಸಬೇಕು. ರಾಜ್ಯ ಮಟ್ಟದಲ್ಲಿ Social Audit Review ಮಾಡಬೇಕು.

**ಕುಡಿಯುವ ನೀರು – ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ಕಳುಹಿಸಬೇಕು. ಸರಕಾರ ಅನುಮೋದನೆ ನೀಡಲಿದೆ.

**ವಾರಾಹಿ ಅಣೆಕಟ್ಟು ನೀರನ್ನು ಉಡುಪಿ ನಗರಕ್ಕೆ ತರಲು ನಗರಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಪರಿಶೀಲಿಸಬೇಕು. ಬೆಂಗಳೂರಿನಲ್ಲಿ ಈ ಬಗ್ಗೆ ಕೂಡಲೇ ಸಭೆ ನಡೆಸಲಾಗುವುದು.

**ಬಾಪೂಜಿ ಕೇಂದ್ರಕ್ಕೆ ಸಿಬ್ಬಂದಿ ನೇಮಕ.

**ಮಹಿಳಾ ಹಾಸ್ಟೆಲ್ ಗಳಿಗೆ ಜಿಲ್ಲಾಧಿಕಾರಿಗಳೂ ಜಾಗ ಗುರುತಿಸಬೇಕು. ಅನುದಾನ ಬಿಡುಗಡೆ ಮಾಡಲಾಗುವುದು. ಹಾಸ್ಟೆಲ್ ಗಳಲ್ಲಿ ಜಾಗ ಇಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕ ಹಾಸ್ಟೆಲ್ ಸ್ಥಾಪಿಸಬೇಕು.

**ಕೊರಗರಿಗೆ ಮನೆ – ಸರಕಾರದಿಂದಲೇ ನಿರ್ಮಿಸಿ ಕೊಡಲಾಗುವುದು.

**ಆರೋಗ್ಯ ಕಾರ್ಡ್ ಬಿ ಪಿ ಎಲ್ ಕಾರ್ಡ್ ತೋರಿಸಿದರೂ ಚಿಕಿತ್ಸೆ ಕೊಡಬೇಕು. ಇದಕ್ಕೆ ಸೂಕ್ತ ಪ್ರಚಾರ ನೀಡಬೇಕು.

**ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – ಗರ್ಭಿಣಿಯರಿಗೆ ಮಾತೃಶ್ರೀ ಯೋಜನೆ ಮುಂದುವರಿಕೆ, ಬಿ ಪಿ ಎಲ್, ಗರ್ಭಿಣಿಯರಿಗೆ ಮಾಸಿಕ ರೂ 200/-.

**ಮರಳು – ಮನೆ ಕಟ್ಟುವವರಿಗೆ ಸರಳವಾಗಿ ಮರಳು ಸಿಗಬೇಕು.

**ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುವವರಿಗೆ ಅವಕಾಶ ನೀಡಬೇಕು.

**ಯಾಂತ್ರಿಕವಾಗಿ ಮತ್ತು ಅಕ್ರಮವಾಗಿ ಮರಳುಗಾರಿಕೆಗೆ ಅವಕಾಶ ನೀಡಬಾರದು, ಹಾಗೂ ಹೊರಗಡೆ ಸಾಗಿಸಲು ಅವಕಾಶ ನೀಡಬಾರದು.

**N.I.T.K. ವರದಿ ಮೇಲೆ ಮುಂದಿನ ನಿರ್ಧಾರ.

**ಡೀಮ್ಡ್ ಫಾರೆಸ್ಟ್ – ವ್ಯಾಪ್ತಿ ಸ್ಪಷ್ಟವಾಗುವವರೆಗೆ ಕಂದಾಯ ಇಲಾಖೆಯವರು ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಾರದು.