subpage
11-10-2014

ಕೇಂದ್ರ ರೈಲ್ವೆ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರ ತಾಯಿಯವರಾದ ಶ್ರೀಮತಿ ಕಮಲ ಅವರ ನಿಧನಕ್ಕೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ. ...
ಸಹೋದರಿಯ ಸಾವಿನ ಬೆನ್ನಲ್ಲೇ ಶ್ರೀ ಸದಾನಂದ ಗೌಡ ಅವರಿಗೆ ಮಾತೃ ವಿಯೋಗವೂ ಆಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮೃತರಿಗೆ ಆತ್ಮಶಾಂತಿ ದೊರಕಲೆಂದೂ ಹಾಗೂ ಶ್ರೀ ಸದಾನಂದ ಗೌಡ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದೂ ಶ್ರೀ ಸಿದ್ದರಾಮಯ್ಯ ಅವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.