" ಮಹದಾಯಿ:ನ್ಯಾಯಾಧಿಕರಣದಲ್ಲಿ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟ - ಮುಖ್ಯಮಂತ್ರಿ   |   " ಸಚಿವ ಸಂಪುಟದ ನಿರ್ಣಯಗಳು   |   " ಅಪೆಕ್ಸ್ ಬ್ಯಾಂಕ್‍ನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಹಣ ಠೇವಣಿ - ಮುಖ್ಯಮಂತ್ರಿ   |   " ಸಾರ್ವಜನಿಕರ ಹಿತಕ್ಕೆ ಆಧ್ಯತೆ ನೀಡಿ, ಮುಷ್ಕರ ಕೈಬಿಡಿ - ಮುಖ್ಯಮಂತ್ರಿ   |   " (ಮೈಸೂರು) ಜನಪರ, ಜನಸ್ನೇಹಿ ಆಡಳಿತ ನೀಡಲು ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಸಲಹೆ   |   " ಮೈಸೂರಿನಲ್ಲಿ ಮುಖ್ಯಮಂತ್ರಿ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ನೀಡಿದ ಪ್ರತಿಕ್ರಿಯೆಯ ಮುಖ್ಯಾಂಶಗಳು   |   " ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರೋಪ ಸಮಾರಂಭ - ಮಾನ್ಯ ಮುಖ್ಯಮಂತ್ರಿ ಅವರ ಭಾಷಣದ ಮುಖ್ಯಾಂಶಗಳು   |   " ಸಚಿವ ಸಂಪುಟದ ನಿರ್ಣಯಗಳು   |  

ತಾಜಾಸುದ್ದಿ

ಜುಲೈ 27

ಬೆಂಗಳೂರು: ಮಹದಾಯಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿ ನೀಡಿರುವ ಮಧ‍್ಯಂತರ ತೀರ್ಪಿನಿಂದ ನಿರಾಸೆಯಾಗಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ರಾಜ್ಯದ ಜನತೆ ಈ ತಾತ್ಕಾಲಿಕ ಹಿನ್ನಡೆಯ ಕಾರಣಕ್ಕಾಗಿ ಆವೇಶಕ್ಕೀಡಾಗದೇ ಈ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕೆಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ಜುಲೈ 26

ಬೆಂಗಳೂರು: ನಾಪತ್ತೆಯಾದ ವಾಯುಪಡೆ ವಿಮಾನದಲ್ಲಿದ್ದ ಬೆಳ್ತಂಗಡಿಯ ಏಕನಾಥ ಶೆಟ್ಟಿ ಅವರ ಕುಟುಂಬದವರೊಂದಿಗೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದರು. ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಧೈರ್ಯದಿಂದ ಇರುವಂತೆ ತಿಳಿಸಿದರು.

ಜುಲೈ 26

ಬೆಂಗಳೂರು: ಬೆಂಗಳೂರಿನ ಶ್ರೀಮತಿ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ, ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ನವರು ಆಯೋಜಿಸಿದ್ದ "ಕಾರ್ಗಿಲ್ ವಿಜಯ ದಿವಸ ಸಮಾರಂಭ"ದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಭಾರತದ ರಕ್ಷಣೆಗಾಗಿ ಹೋರಾಡಿ ವಿಜಯ ಪತಾಕೆ ಹಾರಿಸಿದ ವೀರ ಸೈನಿಕರಿಗೆ ಹೆಮ್ಮೆಯ ನಮನ ಸಲ್ಲಿಸಿದರು.

ಜುಲೈ 25

ಕಾವೇರಿ (ಬೆಂಗಳೂರು): ಇತ್ತೀಚೆಗೆ ಆತ್ಮಹತ್ಯೆಗ ಶರಣಾಗಿದ್ದ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರ ಕುಟುಂಬದ ಸದಸ್ಯರು ಅಧಿಕೃತ ನಿವಾಸ ಕಾವೇರಿಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಜುಲೈ 25

ಗೃಹ ಕಛೇರಿ ಕೃಷ್ಣಾ (ಬೆಂಗಳೂರು): ಕನ್ನಡ ಪುಸ್ತಕ ಪ್ರಾಧಿಕಾರವು ದೇಸಿ ದರ್ಶನ ಮಾಲಿಕೆಯಡಿ ಹೊರತಂದಿರುವ ಸಂತಶ್ರೇಷ್ಠ ತಿಂತಿಣಿ ಮೌನೇಶ್ವರರ ವಚನ ಸಂಪುಟವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಗೃಹಕಚೇರಿ ಕೃಷ್ಣಾದಲ್ಲಿ ಲೋಕಾರ್ಪಣೆ ಮಾಡಿದರು.

ಜುಲೈ 25

ಗೃಹ ಕಛೇರಿ ಕೃಷ್ಣಾ (ಬೆಂಗಳೂರು): ರಾಷ್ಟ್ರೀಯ ಜ್ಯೂನಿಯರ್ ಈಜು ಸ್ಪರ್ಧೆಯಲ್ಲಿ 25ನೇ ಬಾರಿಗೆ ಚಾಂಪಿಯನ್ ಟ್ರೋಫಿ ಗಳಿಸಿರುವ ರಾಜ್ಯದ ತಂಡವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಗೃಹಕಚೇರಿ ಕೃಷ್ಣಾದಲ್ಲಿ ಅಭಿನಂದಿಸಿದರು.

ಜುಲೈ 25

ಗೃಹ ಕಛೇರಿ ಕೃಷ್ಣಾ (ಬೆಂಗಳೂರು): ಗೃಹ ಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮಂಡಳಿ ಸಭೆ ನಡೆಯಿತು.

ಜುಲೈ 25

ಗೃಹ ಕಛೇರಿ ಕೃಷ್ಣಾ (ಬೆಂಗಳೂರು): ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಿ, ಅಹವಾಲನ್ನು ಸ್ವೀಕರಿಸಿದರು.